“ಸಮಾಲೋಚನೆಯು ಹೆಚ್ಚಿನ ಅರಿವನ್ನು ಮೂಡಿಸುವುದು ಮತ್ತು ಅಸ್ಪಷ್ಟ ವಿಚಾರಗಳಿಗೆ ಸ್ಪಷ್ಟತೆಯನ್ನು ತೋರುವುದು. ಇದು ಪ್ರಕಾಶಿತ ಬೆಳಕು, ಒಂದು ಕತ್ತಲ ಪ್ರಪಂಚದಲ್ಲಿ ದಾರಿಯನ್ನು ಮುನ್ನಡೆಸುವುದು ಮತ್ತು ಮಾರ್ಗದರ್ಶನವನ್ನು ತೋರುವುದು ಪ್ರತಿಯೊಂದಕ್ಕೂ ಒಂದು ಪರಿಪೂರ್ಣತೆಯ ಮತ್ತು ಪಕ್ವತೆಯ ಸ್ಥಾನ ಈಗಲೂ ಮತ್ತು ಮುಂದಕ್ಕೂ ಇರುವುದು. ಅರಿವಿನ ಫಲಶೃತಿಯಾದ ಪಕ್ವತೆಯು ಸಮಾಲೋಚನೆಯ ಮೂಲಕ ಮೈದೋರುವುದು.”
— ಬಹಾಉಲ್ಲಾ
ಬಹಾಯಿ ಧರ್ಮದಲ್ಲಿ ಮತಪಂಡಿತರುಗಳಿಲ್ಲ ಅದರ ವ್ಯವಹಾರಗಳನ್ನು ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುಪ್ತಮತದಾನದ ಮೂಲಕ ಚುನಾಯಿತ ಸಂಸ್ಥೆಗಳಮೂಲಕ ನಿರ್ವಹಿಸಲಾಗುವುದು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಉಮೇದ್ವಾರಿಕೆಯಾಗಲಿ ಪ್ರಚಾರವಾಗಲಿ ಇಲ್ಲ ಈ ಸಂಸ್ಥೆಗಳಿಗೆ ಚುನಾಯಿತರಾದ ವ್ಯಕ್ತಿಗಳಿಗೆ ವಿಶೇಷ ಸ್ಥಾನ ಮಾನಗಳಿಲ್ಲ ಆದರೆ ಅವರು ಚುನಾಯಿತಗೊಂಡ ಆ ಸಂಸ್ಥೆಗಳಿಗೆ ಕಾನೂನನ್ನು ರಚಿಸುವ, ಆಡಳಿತಕ್ಕೆ ತರುವ ಮತ್ತು ನ್ಯಾಯಾಂಗದ ಅಧಿಕಾರವು ಇರುವುದು ಒಂದು ಬಹಾಯಿ ಸಮುದಾಯದ ಆಂತರಿಕ ಆಡಳಿತಾತ್ಮಕ ವ್ಯವಹಾರಗಳಿಗೆ ಈ ಸಂಸ್ಥೆಗಳು ಜವಾಬ್ದಾರಿ ಯುತವಾದುದು. ಒಂದು ಬಹಾಯಿ ಸಮುದಾಯದ ಆಂತರಿಕ ವ್ಯವಹಾರಗಳಿಗೆ ಆ ಸಂಸ್ಥೆಗಳು ಜವಾಬ್ದಾರಿಯುಳ್ಳದ್ದು ಮತ್ತು ಆಧ್ಯಾತ್ಮಿಕ ಮತ್ತು ಭೌತಿಕ ಮೂಲಗಳ ಕಾಲುವೆಯನ್ನಾಗಿ ಮಾಡುತ್ತದೆ.
ಈ ಸಂಸ್ಥೆಗಳು ಬಹಾಯಿ ಆಡಳಿತ ಸಂಸ್ಥೆಯ ಒಂದು ಭಾಗವಾಗಿರುವಾಗ ಸಮಾಲೋಚನೆಯ ತತ್ವದ ಮೇಲೆ ಅದು ಕೆಲಸ ಮಾಡುವುದು. ಈ ತತ್ವಗಳಿಗೆ ಅನುಸಾರವಾಗಿ ಆ ಸಂಸ್ಥೆಯ ಸದಸ್ಯರುಗಳು ಪ್ರತಿಯೊಂದು ವಿಷಯದ ಸತ್ಯವನ್ನು ಅರಿಯಲು ಸಮಾಲೋಚನೆ ನಡೆಸುವರು. ಅವರು ತಮ ಅಭಿಪ್ರಾಯಗಳನ್ನು ನಿಸ್ಪೃಹತೆಯಿಂದ ಸಲ್ಲಿಸುವರು ಮತ್ತೆ ಅವರು ತಮ್ಮ ಸಲ್ಲಿಸಿದ ಅಭಿಪ್ರಾಯಗಳಿಗೆ ಒತ್ತಿಕೊಂಡ್ಡಿರುವುದಿಲ್ಲ, ಅದರ ಬದಲು ಇತರರ ಅಭಿಪ್ರಾಯಗಳಿಂದ ಅದರ ಅಸ್ತಿತ್ವದ ಬಗ್ಗೆ ಹೆಚ್ಚಿನ ಅರ್ಥ ವೈಶಾಲ್ಯವನ್ನು ಕಂಡುಕೊಳ್ಳುವರು. ಗುಂಪುಗಾರಿಕೆ , ಪಿತೂರಿ ಮತ್ತಿತರ ಯಾವುದೇ ವಿಚಾರಗಳಿಂದ ತನ್ನ ಅಭಿಪ್ರಾಯವನ್ನು ಸ್ವೀಕರಿಸುವಂತೆ ಒತ್ತಡ ಹೇರುವುದನ್ನು ಮಾಡಬಾರದು.