“ಪ್ರತಿಯೊಂದು ಮಗುವು ಅಂತಸ್ಥವಾಗಿ ಪ್ರಪಂಚದ ಬೆಳಕು - ಮತ್ತು ಅದೇ ಸಮಯ ಅದರ ಕಪ್ಪುಗತ್ತಲೆ ಕೂಡಾ; ಹಾಗಿರುವಾಗ ಶಿಕ್ಷಣದ ಪ್ರಶ್ನೆಯು ಪ್ರಮುಖ ಅಗತ್ಯವಾಗಿ ಪರಿಗಣಿತವಾಗುತ್ತದೆ”


ಅಬ್ದುಲ್-ಬಹಾ

ಒಂದು ದಟ್ಟನೆಯ ನೆರೆಹೊರೆಯಲ್ಲಿ ಮಕ್ಕಳ ಗುಂಪೊಂದು ನಗುತ್ತಾ ಹಾಸ್ಯಮಾಡುತ್ತಾ ದೊಡ್ಡ ಗುಂಪಿನೊಂದಿಗೆ ಬರುತ್ತಿದ್ದಾರೆ. ದಾರಿಯ ಪೊದೆಯಲ್ಲಿ ಕಡು ಹಳದಿ ಹೂವೊಂದನ್ನು ಕೊಯಿದು ಅದನ್ನು ತಮಗೆ ಆಧ್ಯಾತ್ಮಿಕ ಗುಣಗಳನ್ನು ಹೇಳಿಕೊಡುವ ಒಬ್ಬ ಯುವ ಮಹಿಳೆಯ ಮನೆಗೆ ತರುತ್ತಾರೆ. ತಮ್ಮ ಶಿಕ್ಷಕಿಗೆ ಅಬ್ಬರದಿಂದ ಅಭಿವಾದನೆಗಳನ್ನು ಸಲ್ಲಿಸುತ್ತಾ ಅವರು ಒಂದು ಚಾಪೆಯನ್ನು ಬಿಡಿಸಿ ಅದರ ಮಧ್ಯ ಭಾಗದಲ್ಲಿ ಹೂವುಗಳನ್ನಿಟ್ಟು, ತಾವು ಪ್ರಾರ್ಥನೆಗೆ ಅಣಿಯಾಗುತ್ತಿದ್ದಂತೆ ಕೂಡಲೇ ಮೌನವಾದರು. ಅವರು ದೊಡ್ಡದಾಗಿ ಕಂಠ ಪಾಠ ಮಾಡಿದ್ದ ಪ್ರಾರ್ಥನೆಯನ್ನು ಹೇಳಿದರು ಬಳಿಕ ಅವರು ಮತ್ತೊಂದು ಹೊಸ ಪ್ರಾರ್ಥನೆಯನ್ನು ಕಲಿಯಲು ನೆರವಾದರು. ಅವರು ಒಂದು ಹಾಡನ್ನು ಹಾಡುತ್ತಾರೆ ಮತ್ತೆ ಸತ್ಯ ಸಂಧತೆಯ ಬಗ್ಗೆ ಪವಿತ್ರ ಬರಹದಿಂದ ಆಯ್ದ ವಾಚನವನ್ನು ಓದಿ ಅಧ್ಯಯನ ಮಾಡುತ್ತಾರೆ ಮತ್ತೆ ಈ ಗುಣವನ್ನು ಪ್ರತಿಬಿಂಬಿಸುವ ಒಂದು ಕಥೆಯನ್ನು ಕೇಳುತ್ತಾರೆ. ಬಳಿಕ ಅವರು ಒಂದು ಸಂಘಟಿಕ ಕೂಟದ ಆಟವನು ಆಡುತ್ತಾರೆ ಬಳಿಕ ತಾವು ಕಲಿತ ಬರಹಕ್ಕೆ ಸಂಬಂಧ ಪಟ್ಟಂತೆ ಚಿತ್ರಕ್ಕೆ ಬಣ್ಣವನ್ನು ಹಚ್ಚುವ ತದಾತ್ಮ್ಯತೆಗೆ ಇಳಿಯುತ್ತಾರೆ.

ಶಿಕ್ಷಕನು ಮೊದಲಿಗೆ ಮಕ್ಕಳಿಗೆ ಹೇಳಿಕೊಡುವಾಅಗ ಅದಕ್ಕೆ ರಾಗವನ್ನು ಸಂಯೋಜಿಸುವಾಗ ಸ್ವಲ್ಪ ಕಷ್ಟ ಪಟ್ಟರೂ ಇದಕ್ಕಾಗಿ ಸೂಕ್ತ ಗುಣ ಧರ್ಮವನ್ನು ಅಳವಡಿಸುವಲ್ಲಿ ಮಕ್ಕಳಿಗೆ ಈ ತನಕ ರೂಢಿಯಲ್ಲಿದ್ದ ಕಠಿಣ ಕ್ರಮಗಳನ್ನು ಅನುಸರಿಸುವ ಅಗತ್ಯವಿಲ್ಲವೆಂದು ಕಂಡುಕೊಳ್ಳುತ್ತಾನೆ, ಪರಿಸರದಲ್ಲಿ ಪ್ರೀತಿ ಸಹಕಾರ ಮತ್ತು ಪ್ರಸ್ಪರರಲ್ಲಿ ಗೌರವ ತೋರುವ ಮಕ್ಕಳ ಜ್ಞಾನ ಆಧ್ಯಾತ್ಮಿಕತೆಯ ಜೀವನ ನಡೆಸುವಂತಾಗುವುದೇ ಜ್ಞಾನಾರ್ಜನೆ.ಅವರ ಮನೆಗಳಿಗೆ ಹೋಗುವಾಗ ತಮ್ಮ ಮನೆಯವರೊಡನೆ ಅವರು ಚಿತ್ರಗಳನ್ನು ತೋರಿಸುತ್ತಾರೆ ಮತ್ತೆ ಶಿಕ್ಷಕನು ಅವರ ತಂದೆ ತಾಯಿಯರಿಗೆ ಅವರ ಮಕ್ಕಳು ದಿನವೂ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆಗಳನ್ನು ಪಠಿಸುವಂತೆ ಪ್ರೋತ್ಸಾಹಿಸಿದರು, ಮತ್ತೆ ಅವರ ಮನೆಯಲ್ಲಿ ಒಂದು ಭಕ್ತ್ಯಾತ್ಮಕ ಕೂಟವನ್ನು ನಡೆಸಿಕೊಡುವಂತೆಯೂ ಪ್ರೋತ್ಸಾಹಿಸಿದರು.

ಪ್ರತಿವಾರವೂ ಸಾವಿರಾರು ಸ್ಥಳೀಯ ಯುವಕರು, ಪುರುಷ ಮತ್ತು ಮಹಿಳೆಯರು ತಮ್ಮ ಮನೆ ಬಾಗಿಲನ್ನು ತೆಗೆದಿರಿಸುತ್ತಾ ಮಕ್ಕಳ ನೈತಿಕ ಪಾಠಗಳ ಶಿಕ್ಷಕರಾಗಿ ತಮ್ಮ ನೆರೆಹೊರೆಯಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣವು ದೊರೆಯುವಂತೆ ಮಾಡುತ್ತಿದ್ದಾರೆ. ಈ ತರಗತಿಗಳಲ್ಲಿ ಬರಿ ತಪ್ಪು ಯಾವುದು ಸರಿ ಯಾವುದು ಎಂಬುದನ್ನು ಅರಿಯುವ ಗಮನದ ಹೊರತಾಗಿಯೂ ಆಧ್ಯಾತ್ಮಿಕ ಗುಣಗಳು ಮತ್ತು ನಂಬುಗೆ, ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ವೃಧ್ಧಿ ಗೊಳಿಸುವ ಕಡೆಗೆ ಪ್ರಾಮುಖ್ಯತೆಗಳನ್ನು ಕೊಡುತ್ತಾರೆ. ಒಂದು ಹಳ್ಳಿ ಅಥವಾ ನೆರೆಹೊರೆಯಲ್ಲಿ ಹೆಚ್ಚಿನ ಜನರನ್ನು ಒಳಗೊಂಡಂತೆ ಆ ಸಮುದಾಯದ ಜನರು ಒಟ್ಟಾಗಿ ಕೆಲಸ ಮಾಡುವಂತೆ ಮಕ್ಕಳು ಎನನ್ನು ಕಲಿಯುತ್ತಾರೆ ಎಂಬುದರ ಬಗ್ಗೆ ಜನರು ಅರಿತುಕೊಳ್ಳುವಂತೆ ಪ್ರಯತ್ನಗಳನ್ನು ಮಾಡಲಾಗುವುದು.