“ಈ ದಿವ್ಯ ಅವತಾರಗಳು ಪ್ರಪಂಚದಲ್ಲಿ ವಸಂತಕಾಲ ಆಗಮನದಂತೆ....ಪ್ರತಿಯೊಂದು ವಸಂತದಲ್ಲೂ ಒಂದು ಹೊಸದೇ ಸೃಷ್ಟಿಯ ಕಾಲ........"



ಅಬ್ದುಲ್-ಬಹಾ

ಬಹಾಯಿ ಧರ್ಮವು ಒಂದು ಯೋಜನೆಯನ್ನು ಇಬ್ಬರು ದಿವ್ಯಾವತಾರಗಳಿಗೆ ಹೊರಿಸುವುದರ ಮೂಲಕ ಪ್ರಾರಂಭವಾಯಿತು - ಅವರೇ - ಬಾಬ್ ಮತ್ತು ಬಹಾಉಲ್ಲಾ. ಈ ದಿನ ಬಹಾಯಿ ಧರ್ಮದ ರ್ನಿದಿಷ್ಟ ಐಕ್ಯತೆಯು ಚಿಗುರುತ್ತಿರುವುದು, ಬಹಾಉಲ್ಲಾರವರು ತಮ್ಮ ಕಾಲಾ ನಂತರ ಸೂಕ್ತ ಮಾರ್ಗದರ್ಶನವು ಅವಿರತವಾಗಿ ಸಿಗುವುದು ಎಂಬ ಧ್ಯೇಯದ ಅಡಿಪಾಯದ ಮೇಲೆ. ಈ ಜವಾಬ್ದಾರಿಯ ಮುಂದುವರಿಕೆಯ ಪ್ರಕಾರವನ್ನು ಒಡಂಬಡಿಕೆ ಎನ್ನುವರು, ಅದು ಬಹಾಉಲ್ಲಾರವರಿಂದ ಅವರ ಮಗ ಅಬ್ದುಲ್ ಬಹಾರವರಿಗೆ ಮತ್ತು ಅಬ್ದುಲ್ ಬಹಾ ರವರ ಮೊಮ್ಮಗ ಷೋಘಿ ಎಫ್ಫೆಂಡಿ - ಮತ್ತೆ ವಿಶ್ವ ನ್ಯಾಯ ಮಂದಿರ - ಈ ವಿಧಾಯಕಗಳನ್ನು ಬಹಾಉಲ್ಲಾರವರು ಮಾಡಿದ್ದಾರೆ. ಒಬ್ಬ ಬಹಾಯಿಯು ಬಾಬ್ ಮತ್ತು ಬಹಾಉಲ್ಲಾ ರವರ ದಿವ್ಯ ಅಧಿಕಾರವನ್ನು ಮತ್ತು ಈ ನೇಮಕಾತಿಯ ಮುಂದುವರಿಕೆಯನ್ನು ಸ್ವೀಕರಿಸುತ್ತಾರೆ.

ಬಾಬ್
ಬಾಬ್ ರವರು ಬಹಾಯಿ ಧರ್ಮದ ಅಧ್ವರ್ಯು. ೧೯ನೇ ಶತಮಾನದ ಮಧ್ಯ ಭಾಗದಲ್ಲಿ ತಾನು ಮಾನವತೆಯ ಆಧ್ಯಾತ್ಮಿಕ ಜೀವನವನ್ನು ಬದಲಾಯಿಸುವ ಸಂದೇಶವನ್ನು ಹೊತ್ತು ತಂದವನೆಂದು ಘೋಷಿಸಿಕೊಂಡರು. ಅವರ ಕಾರ್ಯೋದ್ದೆಶವು ಅವರಿಗಿಂತಲೂ ಹಿರಿದಾದ ಎರಡನೇ ಅವತಾರದ ಬರುವಿಕೆಗಾಗಿ ಮಾರ್ಗವನ್ನು ತಯಾರು ಮಾಡಲು ಎಂದರು, ಆ ಎರಡನೇ ಅವತಾರವು ಶಾಂತಿ ಮತ್ತು ನ್ಯಾಯದ ಯುಗ ಪ್ರವರ್ತಕರಾಗುವರು.

ಬಹಾಉಲ್ಲಾ:
ದೇವರ ಜ್ಯೋತಿ - ಬಹಾಉಲ್ಲಾರವರು ಬಾಬ್ ಮತ್ತು ಹಿಂದಿನ ಎಲ್ಲಾ ಅವತಾರಗಳು ಭರವಸೆ ಇತ್ತ ಅವತಾರ ಪುರುಷ. ಬಹಾಉಲ್ಲಾರವರು ದೇವರಿಂದ ಮಾನವತೆಗಾಗಿ ಒಂದು ಹೊಸ ದರ್ಶನವನ್ನು ತೋರಿದರು. ಸಾವಿರಾರು ವಚನಗಳು, ಪತ್ರಗಳು ಮತ್ತು ಗ್ರಂಥಗಳು ಅವರ ಲೇಖನಿಯಿಂದ ಹೊರಹೊಮ್ಮಿದವು. ಅವರ ಬರವಣಿಗೆಗಳಲ್ಲಿ ಒಂದು ವಿಶ್ವ ನಾಗರೀಕತೆಯ ಬೆಳವಣಿಗೆಗಾಗಿ ಒಂದು ಚೌಕಟ್ಟನ್ನು ರೂಪಿಸಿದರು ಅದರಲ್ಲಿ ಮಾನವತೆಯ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಕಾರಗಳ ಉನ್ನತಿಯ ಬಗ್ಗೆಯೂ ರೂಪಿತವಾಗಿತ್ತು. ಇದಕ್ಕಾಗಿ ಅವರು ನಲುವತ್ತು ವರ್ಷಗಳ ಜೈಲು ವಾಸ, ಚಿತ್ರ ಹಿಂಸೆ ಮತ್ತು ಗಡೀಪಾರಿನ ಶಿಕ್ಷೆಯನ್ನು ಅನುಭವಿಸಬೇಕಾಯಿತು.

ಅಬ್ದುಲ್-ಬಹಾ
ತನ್ನ ಉಯಿಲಿನಲ್ಲಿ ಬಹಾಉಲ್ಲಾರವರು ತನ್ನ ಮಗ ಅಬ್ದುಲ್-ಬಹಾ ರವರನ್ನು ತನ್ನ ಬೋಧನೆಗಳ ಅಧಿಕೃತ ವ್ಯಾಖ್ಯಾನಕಾರನೆಂತಲೂ ಧರ್ಮದ ಮುಖ್ಯಸ್ಥನನ್ನಾಗಿಯೂ ನೇಮಕ ಮಾಡಿದರು. ಪೂರ್ವ ಮತ್ತು ಪಾಶಿಮಾತ್ಯಗಳಲ್ಲಿ ಅಬ್ದುಲ್ ಬಹಾರವರು ಶಾಂತಿಯ ದೂತ ಒಬ್ಬ ಮಾದರಿ ಪುರುಷ ಮತ್ತು ಒಂದು ಹೊಸ ಧರ್ಮದ ಪ್ರಮುಖ ಪ್ರತಿಪಾದಕ ಎಂದು ಹೆಸರುವಾಸಿಯಾಗಿದ್ದರು.

ಷೋಘಿ ಎಫೆಂಡಿ
ಅಬ್ದುಲ್ ಬಹಾರವರು ತನ್ನ ಹಿರಿಯ ಮೊಮ್ಮಗ ಷೋಘಿ ಎಫೆಂಡಿಯವರನ್ನುಬಹಾಯಿ ಧರ್ಮದ ರಕ್ಷಕನ್ನಾಗಿ ನೇಮಕ ಮಾಡಿದರು, ಅವರು ೩೬ ವರ್ಷಗಳ ಪರ್ಯಂತ ಧರ್ಮದ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ಪೋಷಿಸುತ್ತಾ, ಧರ್ಮದ ಅರಿವನ್ನು ಹೆಚ್ಚಿಸುತ್ತಾ, ಬಹಾಯಿ ಸಮುದಾಯದ ಐಕ್ಯತೆಯನ್ನು ಬಲಪಡಿಸುತ್ತಾ, ಸಮಗ್ರ ಮಾನವ ಜನಾಂಗದ ವೈವಿಧ್ಯತೆಯನ್ನು ಹೆಚ್ಚಿನ ಪ್ರಕಾರದಲ್ಲಿ ಬೆಳಗುವಂತೆ ಮಾಡುವಲ್ಲಿ ಶ್ರಮಿಸಿದರು.

ವಿಶ್ವ ನ್ಯಾಯ ಮಂದಿರ
ಪ್ರಸ್ತುತ ಪ್ರಪಂಚದಲ್ಲಿನ ಬಹಾಯಿ ಧರ್ಮದ ಬೆಳವಣಿಗೆಯನ್ನು ವಿಶ್ವನ್ಯಾಯ ಮಂದಿರವು ನಿರ್ದೇಶಿಸುತ್ತದೆ. ಬಹಾಉಲ್ಲಾ ರವರು ತನ್ನ ನಿಯಮಾವಳಿಯ ಗ್ರಂಥದಲ್ಲಿ ಮಾನವತೆಯ ವ್ಯವಹಾರಗಳಲ್ಲಿ ಪೂರಕ ಪ್ರಭಾವವನ್ನು ಬೀರುವಂತೆ, ಶೈಕ್ಷಣಿಕ, ಶಾಂತಿ ಮತ್ತು ಜಾಗತಿಕ ಸಂಪದಭಿವೃಧ್ಧಿಯನ್ನು ಮತ್ತು ಮಾನವನ ಔನ್ನತ್ಯ ಧರ್ಮದ ಸ್ಥಾನ ಮಾನವನ್ನು ಕಾಪಾಡಿ ಬೆಳೆಯಿಸುವಂತೆ ಸೂಚನೆಗಳನ್ನು ನೀಡಿದ್ದಾರೆ.