“ಯುವ ಪ್ರಾಯವು ಶಕ್ತಿ ಮತ್ತು ಚೇತನದ ಗುಣ ವಿಶೇಷತಿಯಿಂದ ಕೂಡಿದುದು ಮತ್ತು ಮಾನವ ಜಿವನದಲ್ಲಿ ಒಂದು ಆಯ್ದ ಕಾಲ ಎಂದು ಎದ್ದು ತೋರುತ್ತದೆ. ಆದುದರಿಂದ ನೀವು ರಾತ್ರಿ ಹಗಲೂ ಈ ಸ್ವರ್ಗೀಯ ಶಕ್ತಿಯನ್ನು ಪ್ರಖರ ಸುದುದ್ಧೇಶದ ಪ್ರೋತ್ಸಾಹದೊಡನೆ ಮತ್ತು ಅಲೌಕಿಕ ಶಕ್ತಿ ಮತ್ತು ಸ್ವರ್ಗೀಯ ಅನುಗ್ರಹ ಮತ್ತು ದೃಢತೆಯೊಡಗೂಡಿ ಬೆಳಗಲು ಶ್ರಮಿಸಬೇಕು.”
— ಅಬ್ದುಲ್-ಬಹಾ
ಮಾನವ ಜೀವನದಲ್ಲಿ ಯುವ ಪ್ರಾಯವನ್ನು ಮೂಲಥ: ಕಾರಂಜಿಯ ಕಾಲ ಎಂದು ಬಹಾಯಿ ಸಮುದಾಯವು ಗುರುತಿಸಿಕೊಳ್ಳುತ್ತದೆ. ಯುವ ಜನರ ಈ ಅತ್ಯದ್ಭುತವಾದ ಬುಧ್ಧಿ ಶಕ್ತಿ, ಆಧ್ಯಾತ್ಮಿಕ ಮತ್ತು ಭೌತಿಕ ಸಾಮರ್ಥ್ಯಗಳನ್ನು ಸಾಮಾಜಿಕ ಪರಿವರ್ತನೆಗೆ ಹರಿಸುತ್ತಾ ಆ ಸಮುದಾಯ ಮತ್ತು ಆ ಯುವಕರು ಅವರವರ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಬಲ್ಲರು ೧೧ ರಿಂದ ೧೪ ವರ್ಷದಕಿರಿಯ ಕ್ಷ್ರಿಪ್ರ ಬದಲಾವಣೆಗೆ ಅಂದರೆ ಹುಡುಗುತನವನ್ನು ಬಿಟ್ಟು ಮತ್ತೆ ಪ್ರಬುಧ್ಧತೆಯತ್ತ ಸಾಗಲು ವಿಶೇಷ ತಯಾರಿ ಬೇಕಾಗುತ್ತದೆ. ಈ ಸಣ್ಣ ವಯಸ್ಸಿನ ಯುವಕರನ್ನು ಕಿರಿಯ ಯುವಕರೆನ್ನ ಬಹುದು, ತಮ್ಮ ಬಾಳಿನ ಈ ಅವಧಿಯು ಅವರಲ್ಲಿ ಹಲವು ಪ್ರಶ್ನೆಗಳು ಮತ್ತು ಬಯಕೆಗಳು ಇರುತ್ತವೆ ಆವಯೋ ಮಾನದ ಗುಂಪನ್ನು ಕೆಲವೊಮ್ಮೆ ತೊಂದರೆಯ ಮತ್ತು ನಕಾರಾತ್ಮಕ ಭಾವಗಳ ಕಾಲಗಳೆಂದು ಬಿಂಬಿಸಿದರೂ ಯುವಕರಿಗಾಗಿರುವ ಕಾರ್ಯಕ್ರಮಗಳನ್ನು ಪರೋಪಕಾರ ಬುಧ್ಧಿಯ ಈ ಯುವ ಗುಂಪಿನ ಅರಿವಿನ ಮಟ್ಟಕ್ಕೆ ತಯಾರಿಸಿ ಅವರು ಪ್ರಪಂಚವನ್ನು ಅರಿಯುವ ಕಾತರತೆಗೆ ತಕ್ಕುದಾಗಿ ಪ್ರಪಂಚದ ಉತ್ತಮತೆಗೆ ನ್ಯಾಯ ಮತ್ತು ಉತ್ಸಾಹದಾಯಕವಾಗಿ ಕೆಲಸಮಾಡಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಹಲವು ಸಾಧ್ಯತೆ ಮತ್ತು ಸವಾಲುಗಲಿರುವ ಈ ಕಾಲವನ್ನು ದಾಟಲು ಆ ಗುಂಪಿಗೆ ಸಹಾಯಮಾಡಲು ಕಿಶೋರರ ಆಧ್ಯಾತ್ಮಿಕ ಸಬಲೀಕರಣಕ್ಕೆ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ಬಹಾಯಿ ಸಮುದಾಯವು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಅಂಗವಾಗಿ ಹದಿನೈದು ವರ್ಷಕ್ಕೆ ಹೆಚ್ಚಿನ ಯುವಕರು ಅನುಪ್ರೇರಕರಾಗಿ ಸೇವೆ ಸಲ್ಲಿಸಲು ತರಬೇತಿಯನ್ನು ಪಡೆಯುತ್ತಾರೆ, ಅವರು ಚಿಕ್ಕ ಗುಂಪಿನ ಕಿರಿಯ ಯುವಕರ ಜೊತೆಗೂಡಿ ತಮ್ಮದೇ ಪರಿಸರದಲ್ಲಿ ಸೇವೆಸಲ್ಲಿಸುತ್ತಾರೆ. ತಮ್ಮ ಅನುಪ್ರೇರಕರ ಈ ಕಿರಿಯ ಯುವಕರು ತಮ್ಮ ಮನಸ್ಸನ್ನು ಕವಿದ ಪ್ರಬುಧ್ಧ ಪ್ರಶ್ನೆ ಗಳಿಗೆ ಉತ್ತರವನ್ನು ಕಂಡು ಹುಡುಕುತ್ತಿದ್ದಾರೆ. ತಮ್ಮ ಆಧ್ಯಾತ್ಮಿಕ ಗ್ರಹಿಕೆಯನ್ನು ವೃಧ್ಧಿ ಪಡಿಸಲು ಮತ್ತು ನೈತಿಕತೆಯ ಚೌಕಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಅಧ್ಯಯನ ಮಾಡುತ್ತಾರೆ. ಒಂದು ಪೂರಕದ ಭಾವದಲ್ಲಿ ತಮ್ಮ ಅಭಿಪ್ರಾಯಗಳನ್ನು ಶಕ್ತಿಯುತವಾಗಿ ಬಿಂಬಿಸಲು ಬರಹಗಳು ಅವರಿಗೆ ಸಹಾಯಕವಾಗುತ್ತವೆ. ಮತ್ತು ತಮ್ಮ ಸಮುದಾಯಗಳಲ್ಲಿ ತಮ್ಮ ಆದಮ್ಯ ಚೇತನದೊಡನೆ ತಮ್ಮ ಸೇವೆಗಳಲ್ಲಿ ತೊಡಗುವಂತೆ ಅವು ಸಹಾಯ ಮಾಡುತ್ತವೆ. ವಾಸ್ತವತೆಯ ಅನ್ವೇಷಣೆಯು ಕಾರ್ಯಕ್ರಮಗಳು ಅವರನ್ನು ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ತ್ರುತ್ವ ಮತ್ತು ವಿನಾಶಕಾರಿ ಶಕ್ತಿಗಳ ಜಿಜ್ಞಾಸೆಯಲ್ಲಿ ತೊಡಗುವಂತೆ ತಾವು ಉದಾತ್ತ ಜೀವಿಗಳ ಭಾವದ ಗುರುತನ್ನು ಅಳಿಸುವ ಶಕ್ತಿಗಳ ವಿರುಧ್ಧ ಕೆಲಸ ಮಾಡಲು ಅದು ಸಹಾಯವೆಸಗುತ್ತದೆ.ಮತ್ತು ಪೂರಕ ಬದಲಾವಣೆಯನ್ನು ತಂದು ಕೊಡುವ ತಮ್ಮಪ್ರಯತ್ನಕ್ಕೆ ತಮ್ಮನ್ನು ಸಮಾನಕರಿಸಲು .ಸಾವಿರಾರು ಕಿರಿಯ ಯುವಕರು ಭಾರತದಲ್ಲಿ ಪ್ರಸ್ತುತ ಇಂತಹ ಗುಂಪುಗಳಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಇದಕ್ಕೆ ಕಿರಿಯ ವಯಸ್ಕರೂ ತಮ್ಮ ಬಿಡುವಿನ ವೇಳೆಯಲ್ಲಿ ಅನುಪ್ರೇರಕರಾಗಿ ಸೇವೆ ಸಲ್ಲಿಸಲು ಸ್ವಯಂ ಸೇವಕರಾಗಿ ಮುಂದೆ ಬರುತ್ತಾರೆ.