“ಮತ್ತೆ ಬಹಾಉಲ್ಲಾರವರ ಬೋಧನೆಗಳಲ್ಲಿ ಪ್ರಪಂಚದಲ್ಲಿ ಮಾನವ ಜನಾಂಗದ ಪ್ರಗತಿಗೆ ಆರ್ಥಿಕ ಪ್ರಗತಿಗೆ ಭೌತಿಕ ನಾಗರೀಕತೆಯು ಮುಖ್ಯವಾದರೂ ಅದು ದಿವ್ಯ ನಾಗರೀಕತೆಯೊಡನೆ ಮಿಳಿತವಾಗದಿದ್ದರೆ ಮಾನವ ಜನಾಂಗದ ಸಖ್ಯವನ್ನೆಂದೂ ಸಾಧಿಸಲಾಗದು.”
— ಅಬ್ದುಲ್-ಬಹಾ
ಪ್ರಪಂಚದಾದ್ಯಂತ ಬಹಾಉಲ್ಲಾರವರ ದೂರ ದೃಷ್ಟಿಯಿಂದ ಪ್ರಚೋದನೆಗೊಂಡು ಒಂದು ಚೈತನ್ಯ ಭರಿತ ಸಮುದಾಯವನ್ನು ಕಟ್ಟಲು ಹಲವು ಆಧ್ಯಾತ್ಮಿಕ ಮತ್ತು ಭೌತಿಕ ಪ್ರಗತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳತೊಡಗಿದರು. ಇಂತಹ ಸಮುದಾಯಗಳನ್ನು ಸ್ಥಾಪಿಸಲು ಅದನ್ನು ಕಟ್ಟುವವರಲ್ಲಿ ಅಂದರೆ ಬಿಡಿ ವ್ಯಕ್ತಿಗಳ ಮತ್ತು ಸಂಸ್ಥೆಗಳ ಸಾಮರ್ಥ್ಯ ಮತ್ತು ಪ್ರಬುಧ್ಧತೆಯ ಹೆಚ್ಚಳದ ಅಗತ್ಯವಿರಬೇಕು. ಭಾರತದಾದ್ಯಂತ ಪ್ರಸ್ತುತ ಇಂತಹ ಸಾಮರ್ಥ್ಯವನ್ನು ಹೆಚ್ಚಿಸುವುದು ಅರಾಧನೆ ಮತ್ತು ಸೇವಾ ಭಾವದ ಕೇಂದ್ರದ ಸುತ್ತ ಹಮ್ಮಿಕೊಂಡ ಚಟುವಟಿಕೆ ಮತ್ತು ಕಾರ್ಯಕ್ರಮಗಳ ಮೂಲಕ.
ಬಹಾಯಿ ಬೋಧನೆಗಳಲ್ಲಿನ ಅಂತರ್ದೃಷ್ಟಿಯನ್ನು ಹಂಚಿಕೊಳ್ಳುವುದರ ಮುಲಕ ಸಾಮುದಾಯಿಕ ಆರಾಧನೆಗೆ ಅವಕಾಶಗಳನ್ನು ಕಲ್ಪಿಸಿಕೊಳ್ಳುತ್ತ, ಯುವಕರನ್ನು ಸಬಲೀಕರಿಸಿಕೊಳ್ಳುತ್ತ , ಮಿತ್ರರುಗಳ ಗುಂಪುಗಳಲ್ಲಿ ದೇವರ ನುಡಿಗಳ ಅಧ್ಯಯನ ಮಾಡುತ್ತ ಅದನ್ನು ಪ್ರಪಂಚದ ಒಳಿತಿಗೆ ಅದನ್ನು ಅನ್ವಯಿಸುವಂತೆ, ಭಾಗವಹಿಸಿದವರು ಆರಾಧನೆ ಮತ್ತು ಸಾಮಾನ್ಯ ಒಳಿತನ್ನು ಜೊತೆಗೂಡಿಸಿಕೊಳ್ಳುತ್ತಾ ಸಮುದಾಯ ಕಟ್ಟುವ ಪ್ರಕಿಯೆಯಲ್ಲಿ ತೊಡಗಿಕೊಂಡರು.