“ಪ್ರಪಂಚದ ಎಲ್ಲ ಧರ್ಮದವರಿಗೂ ಒಂದು ಆರಾಧನಾ ಮಂದಿರವನ್ನು ಕಟ್ಟ ಬೇಕೆಂದು ವಿಧಾಯಕ ಮಾಡಿದ್ದಾರೆ; ಇದರಲ್ಲಿ ಎಲ್ಲಾ ಧರ್ಮದವರು, ಜನಾಂಗ ಮತ್ತು ಪಂಗಡದವರು ಈ ಸಾರ್ವತ್ರಿಕ ತಂಗುದಾಣದ ಅಡಿಯಲ್ಲಿ ಒಟ್ಟುಸೇರಲು ಬರುತ್ತಾರೆ. ಇದರಿಂದ ಮಾನವ ಜನಾಂಗದ ಏಕತೆಯೆಂಬ ಘೋಷಣೆಯು ಅದರ ತೆರೆದ ಪಾವಿತ್ರ್ಯದ ಮಂದಿರದಿಂದ ಹೊರಹೋಗುವುದು.”
— ಅಬ್ದುಲ್-ಬಹಾ
ಬಹಾಯಿಗಳಿಗೆ ಭಕ್ತ್ಯಾತ್ಮಕ ಜೀವನವೆಂದರೆ ಅದು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತಮ್ಮ ವ್ಯಕ್ತಿಗತ ತೃಪ್ತಿ ಗಾಗಿ ಕಳೆದ ಸಮಯವಲ್ಲ; ಅದು ಬಿಡಿ ವ್ಯಕ್ತಿ ಮತ್ತು ಸಮುದಾಯಕ್ಕೆ ಪ್ರಪಂಚವನ್ನು ಒಳ್ಳೆದು ಮಾಡುವ ಕೃತ್ಯಗಳನ್ನು ಎಸಗುವಂತೆ ಪ್ರೇರೇಪಿಸುವ ಆಧ್ಯಾತ್ಮಿಕ ಶಕ್ತಿಯ ಅಭಿವ್ಯಕ್ತಿಸುವಿಕೆ.
ಆರಾಧನೆ ಮತ್ತು ಸೇವೆ ಇವುಗಳ ಮಧ್ಯದ ಸಂಬಂಧಗಳ ದೃಷ್ಟಿಯಿಂದ ಪ್ರಾರ್ಥನೆಯು ಕೃತ್ಯಗಳಿಗೆಡೆ ಮಾಡ್ಡಿಕೊಡುತ್ತದೆ ಮತ್ತು ಕೃತ್ಯಗಳು ಆಧ್ಯಾತ್ಮಿಕತೆಯಿಂದಕೂಡಿರುತ್ತದೆ. ಆಧ್ಯಾತ್ಮಿಕ ಪಥವನ್ನು ಪ್ರಾತ್ಯಕ್ಷಿಕ ರೀತಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗುವುದು. ಭಾರತದಾದ್ಯಂತ ಹಳ್ಳೀ ಮತ್ತು ನೆರೆಹೊರೆಯಲ್ಲಿ ಆರಾಧನೆ ಮತ್ತು ಸೇವಾಭಾವವು ನಿಕಟವಾಗಿ ಪರಸ್ಪರತೆಯಿಂದ ಸಾಮುದಾಯಿಕ ಜೀವನದಲ್ಲಿ ಹಾಸುಹೊಕ್ಕಾಗಿದೆ.
ನವದೆಹಲಿಯ ಬಹಾಯಿ ಆರಾಧನಾ ಮಂದಿರವು, ಕಮಲ ಮಂದಿರವೆಂದು ಹೆಸರು ಪಡೆದಿದ್ದು, ಬಹಾಯಿ ಜೀವನದ ಈ ಎರಡು ಭಾವಗಳನ್ನು ಒಟ್ಟಿಗೆ ತರುತ್ತದೆ ಅದುವೇ ಆರಾಧನೆ ಮತ್ತು ಸೇವೆ. ಈ ಆರಾಧನಾ ಮಂದಿರದ ಮಧ್ಯ ಭಾಗದಲ್ಲಿ ಒಂದು ವಿಶಾಲ ಪ್ರರ್ಥಾನಾ ಸಭಾಂಗಣವಿದೆ, ಅದಕ್ಕೆ ೯ ಬಾಗಿಲುಗಳಿವೆ, ಇದು ಎಲ್ಲಾ ಧರ್ಮಗಳ ಏಕತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಎಲ್ಲಾ ಧರ್ಮಗಳ ಬೋಧನೆಯು ಮತ್ತು ಅವತಾರಗಳು ಅಂತಿಮವಾಗಿ ತನ್ನ ಅಸ್ತಿತ್ವದಲ್ಲಿ ಒಂದೇ ಬಾಗಿಲತ್ತ ತೋರುತ್ತದೆ ಎಂದು ಸೂಚಿಸುತ್ತದೆ ಈ ಆರಾಧನಾ ಮಂದಿರದ ಸುತ್ತ ಹೂವಿನ ತೋಟವಿದ್ದು ಸಂದರ್ಶಕನ ಆಧ್ಯಾತ್ಮಿಕ ಭಾವಕ್ಕೆ ಆಧ್ಯಾತ್ಮಿಕ ಭಾವವನ್ನು ತಂದು ಕೊಡುತ್ತದೆ. ಈ ಆರಾಧನಾ ಮಂದಿರ ಸುತ್ತ ಹಲವಾರು ಅವಲಂಬನಕಾರಿ ಸಂಸ್ಥೆಗಳನ್ನು ಮುಂದಕ್ಕೆ ಸ್ಥಾಪಿಸಲಾಗುವುದು ಅದು ಮಾನವರ ಭೌತಿಕ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದು. ಇಲ್ಲಿ ನಡೆಸಲ್ಪಡುವ ಪ್ರಾರ್ಥನೆ ಮತ್ತು