“ನಾಗರೀಕತೆಯು ವಿಕಸನಗೊಂಡಿದೆ. ರಾಷ್ಟ್ರಗಳು ಪ್ರಗತಿಗೊಳ್ಳುತ್ತಿವೆ...ವಿಜ್ಞಾನ, ಸಂಶೋಧನೆ ಮತ್ತು ಅನ್ವೇಷಣೆಯು ಪ್ರಗತಿಗೊಂಡಿದೆ. ಇದೆಲ್ಲವೂ, ಈ ಪ್ರಾಪಂಚಿಕ ಅಸ್ತಿತ್ವವು ಅಭಿವೃಧ್ಧಿಗೊಳ್ಳುತ್ತಾ ಮುಂದುವರಿಯುತ್ತದೆ ಎಂಬುದನ್ನು ತೋರಿಸುತ್ತದೆ, ಆದುದರಿಂದ ನಿಶ್ಚಯವಾಗಿಯೂ, ಮಾನವನ ಪ್ರಬುಧ್ಧತೆಯ ಗುಣಲಕ್ಷಣಗಳು ಅದೇ ರೀತಿ ವಿಕಸಿಸುತ್ತಾ ಬೆಳೆಯುತ್ತಿದೆ.”



ಅಬ್ದುಲ್-ಬಹಾ

ಮಾನವಜನಾಂಗವು ಪ್ರಸ್ತುತ ತನ್ನ ಅಪ್ರಬುಧ್ಧ ಬಾಲ್ಯಾವಸ್ಥೆಯನ್ನು ಕಳೆದು ಪ್ರಬುಧ್ಧತೆಯತ್ತ ಬದಲಾಗುವ ಕಾಲದಲ್ಲಿದೆ. ಪ್ರಪಂಚದಲ್ಲಿ ಕಾಣುವ ಈ ಬದಲಾವಣೆಯಂತೆ ಭಾರತೀಯ ಸಾಮಾಜವು ದಿಗ್ಭ್ರಮಾರೂಪಕ ವಾಗಿ ಬದಲಾಗುತ್ತಿದೆ, ಇಲ್ಲಿಯ ಸ್ಥಿತಿಗತಿಗಳು, ಕಟ್ಟುಪಾಡುಗಳು ಮತ್ತು ಹಿಂದಿನ ಕಾಲದ ಪರಂಪರೆಯು ಪ್ರಪಚಲಿತ ಪ್ರಗತಿದಾಯಕ ಸಂಕೀರ್ಣತೆಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸಲಾಗದು. ವ್ಯಕ್ತಿಗತ ನೆಲೆಯಲ್ಲಿ ಮತ್ತು ಸಾಮಾಜಿಕವಾಗಿಯೂ ಈ ಪ್ರಗತಿದಾಯಕ ಹಂತಕ್ಕೆ ಏರುವ ನೈತಿಕ ಪುನರುತ್ಥಾನವಾಗಬೇಕೆಂಬ ಮೊರೆಯು ಈಗ ಎಲ್ಲಾ ದಿಕ್ಕುಗಳಲ್ಲೂ ಕೇಳಿಬರುತ್ತಿದೆ

ಚಾರಿತ್ರಿಕವಾಗಿ ಸಾಮಾಜಿಕ ನೆಲೆಗೆ ಬೇಕಾದ ನಾಗರಿಕ ಮಾನವ ಸ್ವಭಾವ ಮತ್ತು ನೈತಿಕತೆಗೆ ಕಾನೂನು ಕಟ್ಟುಪಾಡುಗಳಿಗೆ ಧರ್ಮವೇ ಪ್ರಮುಖ ಶಕ್ತಿಯು ಆಗಿತ್ತು. ದಿವ್ಯಾವತಾರಗಳಾದ ಕೃಷ್ಣ, ಬುಧ್ಧ, ಜೊರಾಸ್ಟೆರ್, ಮೋಸೆಸ್, ಜೀಸಸ್ ಕ್ರೈಸ್ಟ್ ಮತ್ತು ಪ್ರವಾದಿ ಮೊಹಮ್ಮದ್ ರವರು ಪ್ರತಿ ಕಾಲಕ್ಕೆ ಬೆಕಾದ ಆಧ್ಯಾತ್ಮಿಕ ಮತ್ತು ನೈತಿಕ ಬೋಧನೆಗಳನ್ನು ಕೊಟ್ಟು ನಾಗರೀಕತೆಯನ್ನು ಮುಂದುವರಿಸಿದರು.

ದಿವ್ಯ ದರ್ಶನದ ಎಂದೂ ಕೊನೆಗೊಳ್ಳದ ಪ್ರಕಟಣಾ ಪ್ರಕಾರಗಳಲ್ಲಿ ಬಹಾಯಿ ಧರ್ಮವು ಇತ್ತೀಚೆಗಿನ ಪ್ರಕಾರ ಬಹಾಯಿ ಧರ್ಮದ ಸಂಸ್ಥಾಪಕ ಬಹಾಉಲ್ಲಾರವರು ಈಗ ಮಾನವ ಜನಾಂಗದ ಸಾಮುದಾಯಿಕ ವಿಕಸನದ ತಿರುವಿನಲ್ಲಿ ಬಂದು ನಿಂತಿದೆ ಎಂದು ಹೇಳಿದ್ದಾರೆ, ಮಾನವ ಜನಾಂಗದ ಐಕ್ಯತೆಯನ್ನು ಸಾಧಿಸಲು ಬೇಕಾದ ಶಕ್ತಿ ಮತ್ತು ಸಾಮರ್ಥ್ಯ ಇದೆ ಎಂದು ಅವರು ತಿಳಿಸಿದ್ದಾರೆ.. ಮಾನವತೆಯು ಪ್ರಬುಧ್ಧತೆಗೆ ಬರುವ ಈ ಕಾಲಘಟ್ಟದಲ್ಲಿ ಬಿಡಿ ವ್ಯಕ್ತಿ, ಸಮುದಾಯ ಮತ್ತು ಸಾಮಾಜಿಕ ರಚನೆಯಲ್ಲಿ ಸಂಪೂರ್ಣ ಬದಲಾದ ಜೀವನ ಕ್ರಮದ ಪುನರ್ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ಬದಲಾಗುವ ಈ ಕಾಲ ಘಟ್ಟದಲ್ಲಿ ಬಹಾಯಿ ಧರ್ಮದ ಉದ್ದೇಶವು ಬಿಡಿ ವ್ಯಕ್ತಿಗಳ ಆಂತರಿಕ ಜೀವನದಲ್ಲಿ ನೈಸರ್ಗಿಕ ಬದಲಾವಣೆಯನ್ನು ತಂದು ಅದನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಉನ್ನತಿಗೇರಿಸುವುದು ಮತ್ತು ಅದೇ ರೀತಿ ಸಾಮಾಜಿಕ ಕಟ್ಟುಪಾಡುಗಳಲ್ಲೂ ಪೂರಕ ಬದಲಾವಣೆಗಳೊಂದಿಗೆ ಮಾನವ ಜನಾಂಗದ ಏಕತೆಯ ಗುರಿಯನ್ನು ತಲಪುವುದು.